ಗುಂಡ ಒಂದು ದಿನ ತಂದೆಯ ಬಳಿ ಬಂದು, "ಅಪ್ಪಾ, ಅಪ್ಪಾ... ನನಗೆ ಪಕ್ಕದ್ಮನೆ ಪದ್ಮಾ ಆಂಟಿ ಮಗಳು ಕಾಮಿನಿಯ ಮೇಲೆ ಪ್ರೀತಿ ಉಂಟಾಗಿದೆ" ಎಂದು ಹೇಳಿದ.
ಗುಂಡನ ತಂದೆ ಸುಬ್ಬು, ಸುದ್ದಿ ಕೇಳಿ ಕೈ ದಡಬಡಾಯಿಸಿ, "ಹೌದಾ ಮಗಾ, ಒಂದು ಮಾತು ಹೇಳ್ತೀನಿ, ಯಾರಿಗೂ ಹೇಳ್ಬೇಡ ಕಾಮಿನಿಯನ್ನು ಪ್ರೀತಿಸುವುದನ್ನು ನೀನು ಮರೆತುಬಿಡು. ಯಾಕಂದ್ರೆ, ಆಕೆ ನಿನಗೆ ತಂಗಿಯ ಸಮಾನ" ಎಂದು ಗುಂಡನ ಪ್ರತಿಕ್ರಿಯೆಗೂ ಕಾಯದೆ ಹೊರಟೇಬಿಟ್ಟ.
ಗುಂಡ ಕಕ್ಕಾಬಿಕ್ಕಿಯಾಗಿದ್ದ, ಕೈಕಾಲು ಗಡಗಡ ನಡುಗಲು ಪ್ರಾರಂಭಿಸಿದ್ದವು. ಆದರೂ ಸಾವರಿಸಿಕೊಂಡ...
ಹೀಗೆಯೇ ಹದಿನೈದಿಪ್ಪತ್ತು ದಿನಗಳು ಉರುಳಿದ್ದವು. ಗುಂಡ ಮತ್ತೆ ಲವ್ವಲ್ಲಿ ಬಿದ್ದಿದ್ದ. ಈಗ ಆತನಿಗೆ ಹಿಂದಿನ ಮನೆ ಬಾಲ್ಯದ ಗೆಳತಿ ಭಾಮಿನಿಯ ಮೇಲೆ ಪ್ಯಾರ್ ಆಗಿತ್ತು. ಈ ಮಾತನ್ನು ತಂದೆಯ ಬಳಿ ಹೇಳಿ ಸಜೆಷನ್ ಪಡೆಯೋಣವೆಂದು ಬಂದ.

"ಅಪ್ಪಾ, ನಮಗೆ ನನ್ನ ಬಾಲ್ಯದ ಗೆಳತಿ ಭಾಮಿನಿ ಮೇಲೆ ಲವ್ವಗಿದೆ" ಎಂದು ನಾಚುತ್ತ ಕಾಲಿನ ಹೆಬ್ಬೆರಳಿನಿಂದ ನೆಲೆ ಕೆರೆಯುತ್ತ ಹೇಳಿದ.
ಆಗ ತಂದೆ ಸುಬ್ಬು, "ಮಗನೇ ಅವಳನ್ನು ಮರೆತುಬಿಡು. ಆಕೆಯೂ ಒಂದರ್ಥದಲ್ಲಿ ನಿನ್ನ ತಂಗಿಯೇ ಆಗಬೇಕು" ಎಂದು ಮಗನ ಆಸೆಯನ್ನು ನುಚ್ಚುನೂರು ಮಾಡಿದ್ದ. ಜಂಘಾಬಲ ಉಡುಗಿದಂತಾಗಿದ್ದ ಗುಂಡನ ಮುಖ ಕೆಂಪೇರಿತ್ತು.

ಸಸ್ಪೆನ್ಸ್ ಬೇಡವೇಬೇಡ ಎಂದು ನೇರವಾಗಿ ಅಮ್ಮನ ಬಳಿ ಹೋಗಿ ನಡೆದುದೆಲ್ಲವನ್ನು ಸವಿಸ್ತಾರವಾಗಿ ಹೇಳಿ, ಆಕೆಯ ಸೆರಗಿನಿಂದ ಕಣ್ಣೀರು ಒರೆಸಿಕೊಂಡ.
ದಿಗ್ಮೂಢಳಾದರೂ ಸಾವರಿಸಿಕೊಂಡ ಸುಬ್ಬಿ, "ಲೇ ಗುಂಡ, ಅಳಬೇಡ್ವೋ... ಕಾಮಿನಿನೋ ಭಾಮಿನಿನೋ ಯಾರನ್ನಾದರೂ ಲವ್ ಮಾಡು ಹೋಗೋ. ಖಡಾಖಂಡಿತವಾಗಿ ಹೇಳ್ತೇನೆ ಅವರಿಬ್ಬರೂ ನಿನ್ನ ತಂಗಿಯರಲ್ಲವೇ ಅಲ್ಲ" ಎಂದು ಆತನ ಬೆನ್ನುತಟ್ಟಿದಳು.
"ವಾಟ್, ತಂಗಿಯರಲ್ಲವಾ? ಅದ್ಹೇಗೆ ಹೇಳ್ತೀಯಾ?" ಎಂದು ಕಣ್ಣನ್ನು ಹೊಳಪು ಮಾಡಿಕೊಂಡು ಗುಂಡ ಕೇಳಿದ.
"ಯಾಕಂದ್ರೆ, ನೀನು ನೀನು... ಅವರ ಮಗನೇ ಅಲ್ಲ!" ಎಂದು ಚಟಕ್ಕನೆ ಅಡುಗೆಮನೆ ಹೊಕ್ಕಳು.
@hasyasagara

No comments:
Post a Comment