"ತನಗೆ ಯಾವಾಗಲೂ ದುಡಿಮೆಯೇ ದುಡಿಮೆ... ತನ್ನ ಪತ್ನಿಗೆ ಎಷ್ಟೊಂದು ಆರಾಮ..? ಮನೆಯಲ್ಲಿ ಹಾಯಾಗಿ ಇದ್ದರೆ ಸಾಕು..."
ಹೀಗೆ ಪತಿರಾಯನೊಬ್ಬ ಯೋಚಿಸಿದ.
ಆಗ ದೇವರು ಹೇಳಿದರು -
" ನಾಳೆಯಿಂದ ನೀನು ನಿನ್ನ ಪತ್ನಿಯಾಗಿಯೂ, ನಿನ್ನ ಪತ್ನಿಯು ನೀನಾಗಿಯೂ ಮುಂದಿನ ಜೀವನವನ್ನು ನಡೆಸಬೇಕು.. "
ಆ ಪತಿರಾಯ ಸಂತೋಷದಿಂದ ಕುಣಿದಾಡಿದ...
ಮರುದಿನ ಬೆಳಿಗ್ಗೆ ಆತ ಪತ್ನಿಯಾಗಿ ಬದಲಾಗಿದ್ದ...!
ಪತ್ನಿಯಾಗಿ ಬದಲಾಗಿದ್ದ ಪತಿಯು ಬೆಳಗ್ಗೆ ಬೇಗನೇ ಎದ್ದು ಮಕ್ಕಳಿಗೆ ಮತ್ತು ಪತ್ನಿಯಾಗಿ ಬದಲಾದ ಪತಿಗೂ ಟೀ ತಿಂಡಿಯನ್ನು ತಯಾರು ಮಾಡಿದ... ಮಕ್ಕಳನ್ನು ಎಬ್ಬಿಸಿ ಬ್ರಷ್ ಮಾಡಿಸಿ, ಸ್ನಾನ ಮಾಡಿಸಿ ಟೀ ತಿಂಡಿಯನ್ನು ತಿನ್ನಿಸಿ , ಟಿಫಿನ್ ಬಾಕ್ಸನ್ನು ತುಂಬಿಸಿ, ಅವರಿಗೆ ಯೂನಿಫಾರ್ಮನ್ನು ತೊಡಿಸುತ್ತಿರುವಾಗ ಆಚೆಯಿಂದ ಪತಿಯ ಕೂಗು... ಟೀ ಗೆ ಸಕ್ಕರೆ ಕಡಿಮೆಯಾಗಿದೆ.. ಮತ್ತು ಬಿಸಿನೂ ಇಲ್ಲ... ನನ್ನ ಶರ್ಟ್ ಐರನ್ ಮಾಡಲೂ ಇಲ್ಲ...
ಅಬ್ಬಾ... ಟೀಗೆ ಸ್ವಲ್ಪ ಸಕ್ಕರೆ ಹಾಕಿ ಬಿಸಿಮಾಡಿ ಕುಡಿಯಬಾರದೇ ? ಶರ್ಟ್ ಗೆ ಇಸ್ತ್ರಿ ಸ್ವತಃ ಮಾಡಬಾರದೇ? ಪತ್ನಿಯಾಗಿ ಬದಲಾಗಿದ್ದ ಪತಿಯು ಗೊಣಗಾಡಿದ...
ಹಾಗೆ ಪತಿ ಮತ್ತು ಮಕ್ಕಳಿಗೆ ಬೆಳಗಿನ ಉಪಹಾರವನ್ನು ಕೊಟ್ಟು , ಮಕ್ಕಳನ್ನು ಶಾಲೆಗೂ , ಪತಿಯನ್ನು ಕೆಲಸಕ್ಕೂ ಕಳುಹಿಸಿ , ಪುನಃ ಅಡುಗೆಮನೆಗೆ ಹೋದಾಗ ಪಾತ್ರೆಗಳು ರಾಶಿ ಬಿದ್ದವು... ಪಾತ್ರೆಗಳನ್ನೆಲ್ಲಾ ಕ್ಲೀನ್ ಮಾಡಿ , ಮನೆ, ಅಂಗಳ ಎಲ್ಲಾ ಗುಡಿಸಿ ಸ್ವಚ್ಛ ಮಾಡಿದಾಗ ಹನ್ನೊಂದು ಗಂಟೆ...!!
ಇನ್ನು ಮಧ್ಯಾಹ್ನದ ಊಟ ರೆಡಿಯಾಗಬೇಕು. ಅಂಗಡಿಗೆ ಹೋಗಿ ತರಕಾರಿಗಳನ್ನು ಖರೀದಿಸಿ ಬರುವಷ್ಟರಲ್ಲಿ ಹನ್ನೆರಡು ಗಂಟೆಯಾಗಿತ್ತು. ಬೆಳಗಿನಿಂದ ಇನ್ನೂ ಏನೂ ತಿಂದಿಲ್ಲ... ನಿಂತುಕೊಂಡೇ ಎರಡು ಚಪಾತಿಯನ್ನು ತಿಂದು ಮಧ್ಯಾಹ್ನ ಪತಿ ಬರೋದಕ್ಕೆ ಮುಂಚೆ ಊಟ ರೆಡಿ ಮಾಡಿದ. ಪತಿ ಬಂದು ಊಟ ಮಾಡಿ , ದೂರುಗಳನ್ನು ಹೇಳಿ ಹೋದಾಗ , ಪತ್ನಿಯಾಗಿ ಬದಲಾಗಿದ್ದ ಆತ ಬೇಸರದಿಂದ ತನ್ನ ಕೋಣೆಗೆ ಹೋದ... ಅಲ್ಲಿ ನೋಡಿದರೆ ಅಷ್ಟೊಂದು ಬಟ್ಟೆಗಳು ಒಗೆಯಲು ರಾಶಿ ಬಿದ್ದಿದ್ದವು...
ಅವನ್ನೆಲ್ಲಾ ಒಗೆದು ಒಣ ಹಾಕಿದಾಗ ಸುಸ್ತಾಗೋಯ್ತು...
ಅಷ್ಟರಲ್ಲಿ ನಾಲ್ಕು ಗಂಟೆ ಆಗೋಯ್ತು... ಉಪ್ಪೀಟು ಮತ್ತು ಟೀ ರೆಡಿ ಮಾಡಿ ಇಟ್ಟಾಗಲೇ ನೆನಪಾದದ್ದು ಊಟ ಮಾಡಲೇ ಇಲ್ಲ ಅಂತ... ತಟ್ಟೆಯಲ್ಲಿ ಊಟ ಹಾಕಿ ಸ್ವಲ್ಪ ಊಟ ಮಾಡುವಷ್ಟರಲ್ಲಿ ಮಕ್ಕಳು ಶಾಲೆಯಿಂದ ಬಂದರು...
ಅಲ್ಲಿಗೇ ತನ್ನ ಊಟದ ಶಾಸ್ತ್ರವನ್ನು ಮುಗಿಸಿ ಮಕ್ಕಳಿಗೆ ಟೀ ಮತ್ತು ಉಪ್ಪೀಟನ್ನು ಕೊಟ್ಟು, ಪುನಃ ರಾತ್ರಿಯ ಊಟದ ತಯಾರಿಯಲ್ಲಿ ತೊಡಗುವಷ್ಟರಲ್ಲಿ , ಮಕ್ಕಳ ಜಗಳವನ್ನು ಬಿಡಿಸಲು ಹಲವುಬಾರಿ ಅಂಗಳಕ್ಕೆ ಹೋಗಬೇಕಾಯಿತು.
ರಾತ್ರಿಯ ಊಟ ತಯಾರು ಮಾಡಿ, ಸ್ವಲ್ಪ ಟಿ. ವಿ ಯ ಮುಂದೆ ಕಳಿತಿರುವಷ್ಟರಲ್ಲಿ ಪತಿ ಬಂದ...
ಎಲ್ಲರಿಗೂ ಊಟವನ್ನು ಬಡಿಸಿಕೊಟ್ಟು, ಅಡುಗೆಮನೆ ಕ್ಲೀನ್ ಮಾಡಿ, ಮಕ್ಕಳನ್ನು ಮಲಗಿಸಿ , ಬೆಡ್ ರೂಮಿಗೆ ಬರುವಾಗ ಹನ್ನೊಂದು ಗಂಟೆಯಾಗಿತ್ತು...
ತುಂಬಾ ಸುಸ್ತಾಗಿ ಇನ್ನು ಮಲಗೋಣ ಅನ್ನುವಷ್ಟರಲ್ಲಿ ಪತಿಯ ಸರಸದಾಟ.... ಹಾಗೆ ಪತ್ನಿಯ ಕರ್ತವ್ಯವನ್ನೂ ನೆರವೇರಿಸಿ, ಯಾವಾಗಲೋ ನಿದ್ದೆ ಆವರಿಸಿತು...
ಮರುದಿನ ಬೆಳ್ಳಂಬೆಳಗೆನೇ ಆತ ಎದ್ದು ದೇವರತ್ರ ಬೇಡಿಕೊಂಡ..
" ಓ ದೇವರೇ ನನಗೆ ಸಾಕಾಯಿತು... ನನ್ನನ್ನು ಮುಂಚಿನ ತರಹ ಪತಿಯ ಹಾಗೇ ಮಾಡು.."
ಆಗ ದೇವರು ನಗುತ್ತಾ - " ಭಕ್ತಾ ನೀನು ನಿನ್ನೆ ರಾತ್ರಿ ಗರ್ಭಿಣಿಯಾಗಿದ್ದೀಯ... ಇನ್ನು ಹತ್ತು ತಿಂಗಳುಗಳ ಕಾಲ ಪತ್ನಿಯಾಗಿಯೇ ಬದುಕಬೇಕಷ್ಟೇ..
ಹ್ಹಿ... ಹ್ಹಿ... ಹ್ಹೀ...
😜
😜
😜
😜
😜
😜
😜
😂
😂
@hasyasagara (www.fb.com/hasyasagara)

No comments:
Post a Comment