Thursday, 10 August 2017

ಕಂಪೆನಿಯ ಬಾಸ್

ಮದುವೆಮನೆಯಲ್ಲಿ ಸುಮಾರು ನಲುವತ್ತೈದರ ಹರೆಯದ ಆತ ತೀರಾ ಚಿಂತೆಯಲ್ಲಿ ಕೂತಿದ್ದ. ಆಗಾಗ ನಿಟ್ಟುಸಿರು ಬಿಡುತ್ತಿದ್ದ.
ಹಿರಿಯರೊಬ್ಬರು ಹತ್ತಿರಬಂದು " ಯಾಕಪ್ಪಾ ಇಷ್ಟೊಂದು ಆತಂಕ?" ಎಂದು ಕೇಳಿದರು.
"...ಮೊನ್ನೆ ಮೊನ್ನೆ ತನಕ ನನ್ನ ತೊಡೆಮೇಲೆ ಕೂತು, ತಬ್ಬಿಕೊಂಡು ಮುದ್ದುಮಾಡ್ತಿದ್ದ ಹುಡುಗಿ ...ಈಗ ಮದುವೆ ಮಾಡ್ಕಂಡು ಬೇರೆದೇಶಕ್ಕೆ ಹೋಗ್ತಿದ್ದಾಳೆ ನೋಡಿ!" ಆತ ನಿಟ್ಟುಸಿರು ಬಿಡುತ್ತಾ ಹೇಳಿದ.
" ಹೆಣ್ಣುಮಕ್ಕಳೇ ಹಾಗೆ ಕಣಪ್ಪಾ...ಬೇಗ ಬೆಳೆದುಬಿಡ್ತಾರೆ...ಅವರು ದೊಡ್ಡ ಆದ್ದೇ ಗೊತ್ತಾಗಲ್ಲ..
ಅಂದ ಹಾಗೆ ನೀವು ಹುಡುಗಿಯ ಚಿಕ್ಕಪ್ಪನಾ?"
"ಅಲ್ಲ..,"
"...ಮತ್ತೆ ಸೋದರಮಾವನಾ?"
"ಅಲ್ಲ..."
".....ಮತ್ತೆ!?.."
".....ಅವಳು ಕೆಲಸ ಮಾಡ್ತಿದ್ದ ಕಂಪೆನಿಯ ಬಾಸ್!..."

No comments:

Post a Comment