ಒಬ್ಬ ಖ್ಯಾತ ಭಾಷಣಕಾರ ಒಮ್ಮೆ ಸಮಾರಂಭದ ಭಾಷಣದಲ್ಲಿ ಹೇಳುತ್ತಾ.. "ನನ್ನ ಜೀವನದ ಅತ್ಯಂತ ಸಂತೋಷಮಯೀ ಘಳಿಗೆಗಳೆಂದರೆ ಇನ್ನೊಬ್ಬನ ಹೆಂಡತಿಯೊಂದಿಗೆ ಕಳೆದದ್ದು.." ಎಂದುಬಿಟ್ಟ! ಪ್ರೇಕ್ಷಕರು ಅವಕ್ಕಾದರು.. ಗಿಜಿಗಿಜಿ ಗೊಂದಲ ಕಂಡುಬಂತು.. ತಕ್ಷಣವೇ ಭಾಷಣಕಾರ ಮುಂದುವರೆಸಿ.. "ಅವಳು ನನ್ನ ತಾಯಿಯಾಗಿದ್ದಳು" ಎಂದ. ಸಭೆಯ ಹರ್ಷೋದ್ಗಾರ ಮತ್ತು ಚಪ್ಪಾಳೆ ಮುಗಿಲು ಮುಟ್ಟಿತು. ಎಲ್ಲರೂ ಭೇಷ್ ಭೇಷ್ ಅಂದರು..
ಇದರಿಂದ ಸ್ಫೂರ್ತಿಗೊಂಡವನೊಬ್ಬ ಮನೆಯಲ್ಲಿ ಪ್ರಯೋಗಿಸಲು ನಿರ್ಧರಿಸಿದ. ಅಂದು ರಾತ್ರಿ ಊಟಕ್ಕಾಗಿ ಡೈನಿಂಗ್ ಟೇಬಲ್ ಮೇಲೆ ಕುಳಿತಾಗ ಹೆಂಡತಿಯನ್ನು ಕುರಿತು ಹೇಳಿದ.. "ನನ್ನ ಜೀವನದ ಅತ್ಯಂತ ಸಂತೋಷಮಯೀ ಘಳಿಗೆಗಳೆಂದರೆ ಇನ್ನೊಬ್ಬನ ಹೆಂಡತಿಯೊಂದಿಗೆ ಕಳೆದದ್ದು.." ದುರದೃಷ್ಟವಶಾತ್ ತಕ್ಷಣಕ್ಕೆ ಮುಂದಿನ ಸಾಲು ಮರೆತು ಹೋಗಿತ್ತು.. ಬಹಳ ಕಷ್ಟಪಟ್ಟು ನೆನಪು ಮಾಡಿಕೊಂಡು ಹೇಳಲು ಪ್ರಯತ್ನಿಸಿದಾಗ ಎದುರು ಹೆಂಡತಿ ಬದಲಿಗೆ ಇನ್ಯಾರೋ ನಿಂತಂತೆ ಕಂಡಿತು.. ಕೊಂಚ ಕೊಸರಿ ನೆನಪಿಸಿಕೊಂಡಾಗ ತಿಳಿದದ್ದು.. ಹೆಂಡತಿ ಎರಚಿದ ಸಾಂಬಾರ್ ನಿಂದ ಮುಖವೆಲ್ಲಾ ಸುಟ್ಟು ಮಾತನಾಡಲು ಸಾಧ್ಯವಾಗದೇ ತಾನು ಆಸ್ಪತ್ರೆಯಲ್ಲಿದ್ದು ಎದುರು ಡಾಕ್ಟರ್ ನಿಂತಿದ್ದಾರೆ ಎಂದು.
ನೀತಿ: *ಪೇಸ್ಟ್ ಮಾಡಲಾಗದಿದ್ದರೆ ಕಾಪಿ ಮಾಡಬಾರದು*
No comments:
Post a Comment