Thursday, 10 August 2017

ಪೂಜಾ ಟೀಚರ್

ಸೀರೆಯುಟ್ಟ ಬ್ಯೂಟಿಫುಲ್ ಪೂಜಾ ಟೀಚರ್ ಕ್ಲಾಸೊಳಗೆ ಬಂದಕೂಡಲೆ ಪಿನ್ ಡ್ರಾಪ್ ಸೈಲೆನ್ಸ್ ಇರುತ್ತಿತ್ತು. ಪೋಲಿ ಹುಡುಗರು ಪಾಠ ಕೇಳಲು ಅಷ್ಟು ಸೈಲೆಂಟಾಗಿರುತ್ತಿದ್ದರೋ, ಮತ್ತಾವುದಕ್ಕೋ.
ಒಂದು ದಿನ ಏನಾಯಿತೆಂದರೆ, ಕಿಟಕಿಯ ಬಾಗಿಲುಗಳನ್ನು ಅಲ್ಲೋಲಕಲ್ಲೋಲ ಮಾಡುತ್ತ ಕುಳಿರ್ಗಾಳಿ ಕ್ಲಾಸ್ ರೂಂ ಹೊಕ್ಕು, ಮೇಜಿನ ಮೇಲಿದ್ದ ಚಾಕ್ ಪೀಸುಗಳನ್ನು ಚೆಲ್ಲಾಪಿಲ್ಲಿ ಮಾಡಿತ್ತು. ನೆಲದ ಮೇಲೆ ಬಿದ್ದ ಚಾಕ್ ಪೀಸನ್ನು ಎತ್ತಿಕೊಳ್ಳುವಾಗ, ಪೂಜಾ ತೊಟ್ಟಿದ್ದ ಕೆಂಪು ಕಂಚುಕದ ದರ್ಶನ ವಿದ್ಯಾರ್ಥಿಗಳಿಗೆ ಲಭಿಸಿತು. ತುಂಟ ಸುರೇಶ ಕಿಸಕ್ಕನೆ ನಕ್ಕಿದ್ದ.
"ಯಾಕ್ಲೇ ಸುರೇಶ, ನಗ್ತಿದ್ದಿಯಾ" ಅಂತ ಕೇಳಿದ್ದಕ್ಕೆ ಸುರೇಶನಿಗೆ ನಗು ತಡೆಯಲಾಗಲೇ ಇಲ್ಲ. ಬಾಯಿ ಮುಚ್ಚಿಕೊಂಡು ಇನ್ನೂ ಜೋರಾಗಿ ನಗಲು ಪ್ರಾರಂಭಿಸಿದ. ಆತ ನಕ್ಕಿದ್ದು ಯಾಕೆಂದು ಪೂಜಾಗೆ ಗೊತ್ತಾಯಿತು. ಹೀಗಾಗಬಹುದು ಅಂತ ಬಟ್ಟೆ ತೊಡುವಾಗಲೇ ಆಕೆ ಅಂದುಕೊಂಡಿದ್ದಳು. ಆದರೂ ಅದೇ ದಿರಿಸನ್ನು ಧರಿಸಿ ಬಂದಿದ್ದಳು.
ಸುರೇಸ ಉತ್ತರ ಕೊಡದಿದ್ದಾಗ, ಪಿತ್ತ ನೆತ್ತಿಗೇರಿಸಿಕೊಂಡ ಪೂಜಾ, "ಗೆಟೌಟ್, ಇನ್ನೊಂದು ವಾರ ಕ್ಲಾಸಿನೊಳಗೆ ಬರಬೇಡ" ಎಂದು ಅಬ್ಬರಿಸಿದಳು ಲವೀನಾ.
ಸುರೇಶ ಸದ್ದಿಲ್ಲದೆ ಕ್ಲಾಸಿಂದ ಹೊರಗೆ ನಡೆದ. ಪಾಠ ಮುಂದುವರಿಯಿತು. ಕಿಟಕಿಯಿಂದ ಜೋರಾಗಿ ಗಾಳಿ ಬೀಸಿ ಚಾಕ್ ಪೀಸುಗಳು ಮೇಜಿನ ಮೇಲಿಂದ ನೆಲಕ್ಕೆ ಬಿದ್ದವು. ಅವನ್ನು ಎತ್ತಿಕೊಳ್ಳಲು ಹೋದಾಗ ಮತ್ತದೇ ದೃಶ್ಯ. ಈ ಬಾರಿ ದಿನೇಶ, ಗುಳಗುಳನೆ ನಕ್ಕಿದ್ದ. "ಯಾಕ್ಲೇ ದಿನೇಸ, ನಗ್ತಿದ್ದಿಯಾ" ಅಂತ ಕೇಳಿದ್ದಕ್ಕೆ ದಿನೇಶನದು ಅದೇ ದಿವ್ಯ ಮೌನ. "ಗೆಟೌಟ್, ಇನ್ನೊಂದು ತಿಂಗಳು ನೀನು ಕ್ಲಾಸಿನೊಳಗೆ ಬರಬೇಡ" ಎಂದು ಪೂಜಾ ಹೇಳುವುದು ಮುಗಿಸುತ್ತಿದ್ದಂತೆ ದಿನೇಸ ಜಾಗ ಖಾಲಿ ಮಾಡಿದ್ದ.
ಆ ಪೋಲಿ ಗಾಳಿಯದು ಅದೇನು ತುಂಟತನವಂತೀರಿ? ಮತ್ತೆ ಕಿಟಕಿಯಿಂದ ಗಾಳಿ ಬೀಸಿತ್ತು, ಮತ್ತದೇ ಸನ್ನಿವೇಶ ರಿಪೀಟಾಯಿತು. ಈ ಬಾರಿ ಕಂಟ್ರೋಲ್ ಇಲ್ಲದ ಹಾಗೆ ಗಹಗಹಿಸಿ ನಕ್ಕಿದ್ದು, ಯತೀಶ. ಆದರೆ, ಪೂಜಾ ಬಾಯಿಬಿಡುವ ಮೊದಲೇ ಯತೀಶ ಕ್ಲಾಸಿಂದ ಹೊರಗೆ ಕಾಲುಕಿತ್ತಿದ್ದ. ಆತನ ಕಾಲರ್ ಹಿಡಿದೆಳೆದ ಪೂಜಾ, ಯಾಕೋ ಓಡಿ ಹೋಗ್ತಿದ್ದಿಯಾ ಎಂದು ಅಬ್ಬರಿಸಿದಳು.
"ಏನು ಹೇಳ್ತೀರಿ ಮಿಸ್, ನನ್ನನ್ನು ಶಾಲೆಯಿಂದ್ಲೇ ಡಿಸ್ ಮಿಸ್ ಮಾಡ್ತೀರಿ ಅಂತ ನಾನೇ ಹೊರಟೆ" ಅಂದವನ ಅಂಗಿ ಹಿಡಿದು ಕ್ಲಾಸೊಳಗೆ ಕೂಡಿಸಿದ್ದಳು ಮಿಸ್ ಪೂಜಾ.!
@hasyasagara

No comments:

Post a Comment