ಯೂನಿವರ್ಸಿಟಿ ಲೈಬ್ರರಿಯೊಂದರಲ್ಲಿ ವಿದ್ಯಾರ್ಥಿಗಳು ತುಂಬಿ ಹೋಗಿ ಕುಳಿತುಕೊಳ್ಳಲು ಜಾಗವಿರಲಿಲ್ಲ.. ದೂರದಲ್ಲೊಬ್ಬಳು ಹುಡುಗಿ ಕುಳಿತಿದ್ದಳು ಅವಳ ಪಕ್ಕದ ಸೀಟು ಖಾಲಿ ಇತ್ತು. ಹುಡುಗನೊಬ್ಬ ಅಲ್ಲಿ ಹೋಗಿ.. "ಹಲೋ ನಾನಿಲ್ಲಿ ಕುಳಿತುಕೊಳ್ಳಬಹುದಾ" ಎಂದು ಕೇಳುತ್ತಾನೆ. ತಕ್ಷಣವೇ ಆ ಹುಡುಗಿ ಜೋರಾಗಿ " ಥೂ ನಿನ್ನ.. ನಾನು ನಿನ್ನ ಜೊತೆ ಒಂದು ರಾತ್ರಿ ಕಳೆಯಬೇಕಾ,,,? ಇದು ಅಸಾಧ್ಯ..!!" ಎಂದು ಬಿಟ್ಟಳು.. ಲೈಬ್ರರಿಯಲ್ಲಿದ್ದ ಎಲ್ಲರೂ ಆ ಹುಡುಗನತ್ತ ತಿರಸ್ಕಾರದ ದೃಷ್ಟಿ ಬೀರಿದರು. ಹುಡುಗನಿಗೆ ಅಸಾಧ್ಯ ಅವಮಾನವಾಗುತ್ತದೆ.. ಆತ ದೂರ ಹೋಗಿ ಕುಳಿತುಕೊಳ್ಳುತ್ತಾನೆ.
ಐದು ನಿಮಿಷದ ನಂತರ ಅದೇ ಹುಡುಗಿ ಆ ಹುಡುಗನ ಹತ್ತಿರ ಬಂದು, ನಗುತ್ತಾ, "ನಾನು ಸೈನ್ಸ್ ಸ್ಟೂಡೆಂಟ್,, ನಿಮ್ಮಂಥವರು ಯಾಕಾಗಿ ಹುಡುಗಿಯರ ಹತ್ತಿರ ಬರುತ್ತೀರಾ ಅಂತಾ ನನಗೆ ಗೊತ್ತು.. ಅವಮಾನವಾಗಿದ್ದರೆ ಸ್ಸಾರಿ" ಎನ್ನುತ್ತಾಳೆ.. ಹುಡುಗ ತಕ್ಷಣ ಎಲ್ಲರಿಗೂ ಕೇಳಿಸುವಂತೆ, "ಏನೂ..? ಒಂದು ರಾತ್ರಿಗೆ 5000 ರೂಪಾಯಿ ತುಂಬಾ ಜಾಸ್ತಿಯಾಯ್ತು!!" ಎನ್ನುತ್ತಾನೆ. ಲೈಬ್ರರಿಯಲ್ಲಿದ್ದವರೆಲ್ಲಾ ಹುಡುಗಿಯನ್ನು ವಿಚಿತ್ರವಾಗಿ ನೋಡುತ್ತಾರೆ. ಆ ಹುಡುಗಿಗಂತೂ ಭೂಮಿಯೇ ಬಾಯಿ ಬಿಡಬಾರದೇ ಎಂಬಷ್ಟು ಅವಮಾನವಾಗಿತ್ತು..
ಆ ಹುಡುಗ ಮೆಲ್ಲನೆ ಪಿಸುಗುಡುತ್ತಾನೆ, "ನಾನು ಆರ್ಟ್ಸ್ ಸ್ಟೂಡೆಂಟ್.. ನಿಮ್ಮಂಥವರ ಸೊಕ್ಕು ಇಳಿಸೋದು ನಮಗೆ ಚೆನ್ನಾಗಿ ಗೊತ್ತು..!!
@hasyasagara