ಗಂಡ ರಮೇಶನಿಗೆ ತನ್ನ ಹೆಂಡತಿ ಸ್ಮಿತಾ ಬಗ್ಗೆ ಬಹಳ ಅಪನಂಬಿಕೆ. ಅವಳು ನನಗೆ ಮೋಸ ಮಾಡುತ್ತಿದ್ದಾಳೆ ಎಂಬ ಸಂಶಯ. ಹಾಗಾಗಿ ಒಂದು ದಿನ ತನ್ನ ಆಫೀಸಿನಿಂದ ಮಧ್ಯಾಹ್ನವೇ ಹೊರಟುಬಂದ...
ತನ್ನ ಹೆಂಡತಿ ಸ್ಮಿತಾ ಬೇರೆ ಗಂಡಸಿನ ಜೊತೆ ಸಿಕ್ಕಿ ಬಿದ್ದರೆ ಸಾಕ್ಷಿ ಬೇಕಲ್ಲವೇ..? ಹಾಗಾಗಿ ಕ್ಯಾಬ್ ಡ್ರೈವರ್ ರಂಗನನ್ನು ವಿನಂತಿಸಿಕೊಂಡ. ರಂಗ ಮೊದಲು ಒಪ್ಪಲಿಲ್ಲ. ಕೊನೆಗೆ ರಮೇಶ ಐನೂರು ರೂಪಾಯಿ ಆಸೆ ತೋರಿಸಿ ರಂಗನನ್ನು ಒಪ್ಪಿಸಿದ.
ಮನೆ ತಲುಪಿದಾಗ, ರಮೇಶನ ಊಹೆ ನಿಜವಾಗಿತ್ತು. ಅವನ ಹೆಂಡತಿ ಸ್ಮಿತಾ ಇನ್ನೊಬ್ಬನ ಜೊತೆ ಹಾಸಿಗೆಯಲ್ಲಿ ಇದ್ದಳು. ಸ್ಮಿತಾ ಮತ್ತು ಆ ಗಂಡಸಿನ ದೇಹದ ಮೇಲೆ ನೂಲಿನ ಒಂದೆಳೆಯೂ ಇರಲಿಲ್ಲ. ರಮೇಶ ಸಿಟ್ಟಿನಲ್ಲಿ ಅಲ್ಲೇ ಇದ್ದ ಚೂರಿ ಕೈಗೆ ತೆಗೆದುಕೊಂಡು ಆ ಪರಪುರುಷನನ್ನು ಚುಚ್ಚಲು ಹೋದ. ಆಗ ಸ್ಮಿತಾ, "ರೀ ಬೇಡಾ ರೀ.. ಇವರು ತುಂಬಾ ಒಳ್ಳೆಯವರು.. ನಮ್ಮ ಮಗನ ಶಾಲೆಯ ಖರ್ಚು, ನಮ್ಮ ಸಾಲದ ಕಂತು ಇವರೇ ಕಟ್ಟುತ್ತಿರುವುದು. ನಮ್ಮ ಮನೇಲಿರೋ ಫ್ರಿಡ್ಜು, ವಾಶಿಂಗ್ ಮೆಶೀನು ಕೂಡ ಇವರೇ ಕೊಡಿಸಿದ್ದು.. ನನ್ನ ತವರು ಮನೆಯಿಂದ ಕೊಡಿಸಿದ್ದು ಅಂಥ ನಾನೇ ನಿಮ್ಗೆ ಸುಳ್ಳು ಹೇಳಿದ್ದೆ.."
ರಮೇಶನೂ ಲೆಕ್ಕ ಹಾಕತೊಡಗಿದ. ಅಷ್ಟರಲ್ಲೇ ಸ್ಮಿತಾ, "ನೋಡ್ರೀ ಇವರು ಈ ರಾಜ್ಯದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು.. ಪೊಲೀಸ್, ರಾಜಕಾರಣಿಗಳು ಇವರು ಹೇಳಿದಂತೆ ಕೇಳುತ್ತಾರೆ" ಎಂದಳು. ಅಷ್ಟೊಂದು ಪ್ರಭಾವಶಾ್ಲಿ ವ್ಯಕ್ತಿಯನ್ನು ರಮೇಶ ಮೊದಲ ಬಾರಿ ನೋಡಿದ್ದ..!! ಛೇ ಈಗ ಕ್ಯಾಬ್ ಡ್ರೈವರ್ ಗೆ ಏನು ಹೇಳುವುದು ಎಂದು ಯೋಚಿಸುತ್ತಾ ರಂಗನತ್ತ ತಿರುಗಿದ..
ಆಗ ರಂಗ ಅತಿಯಾದ ಕಾಳಜಿಯೊಂದಿಗೆ, "ನೀವೇನೂ ಯೋಚನೆ ಮಾಡಬೇಡಿ ಸರ್.. ನಾನು ಈ ಪರಪುರುಷನ ಕುಂಡಿಗೆ ಕಂಬಳಿ ಹೊದಿಸುವೆ, ಪಾಪ ಅವರಿಗೆ ಥಂಡಿಯಾಗಬಹುದು.." ಎಂದ..!!
No comments:
Post a Comment