Thursday, 30 June 2016

ಒಂದು ಬಾಳೆ ಹಣ್ಣು ತಿನ್ನೋದಿಕ್ಕಾಯ್ತು!!

ಕಾಲೇಜು ಗೇಟಿನಿಂದ ಹೊರಬಂದ ಹನ್ನೊಂದು ಜನ ಹುಡುಗಿಯರು ಹಾಸ್ಟೆಲ್ಲಿನ ದಾರಿ ಹಿಡಿದಿದ್ದರು. ಹಾಸ್ಟೆಲ್ ಹತ್ತಿರಾಗುತ್ತಿದ್ದಂತೆ ದಾರಿಯಲ್ಲೊಬ್ಬ ಬಾಳೆ ಹಣ್ಣು ಮಾರುತ್ತಿದ್ದವನ ಬಳಿ ಹೋದರು. ಹುಡುಗಿಯರೆಲ್ಲರೂ ತಮ್ಮ ಬಳಿ ಇದ್ದ ದುಡ್ಡು ಒಟ್ಟು ಮಾಡಿ "ಹನ್ನೊಂದು ಬಾಳೆ ಹಣ್ಣು ಕೊಡಿ" ಎಂದರು. " ಇಲ್ಲಮ್ಮಾ ನಾನು ಡಝನ್ ಲೆಕ್ಕದಲ್ಲಿ ಮಾತ್ರ ಮಾರಾಟ ಮಾಡುವುದು" ಎಂದುಬಿಟ್ಟ ಆ ವ್ಯಾಪಾರಿ. ಆ ಹೊತ್ತಿಗೆ ಹಿಂದೆ ನಿಂತಿದ್ದ ಹುಡುಗಿಯೊಬ್ಬಳು ಮೆಲ್ಲಗೆ ಪಿಸುಗುಟ್ಟಿದಳು " ಇರಲಿ ಬಿಡ್ರೇ ಒಂದು ಬಾಳೆ ಹಣ್ಣು ತಿನ್ನೋದಿಕ್ಕಾಯ್ತು!!"